by 1 on | 2025-01-23 20:23:11
Share: Facebook | Twitter | Whatsapp | Linkedin | Visits: 920
ಬಾಗಲಕೋಟೆ : ಮಕ್ಕಳ ಮದುವೆಗೆ ಕೈಗಡ ಪಡೆದಿದ್ದ ವಿಪರೀತ ಸಾಲದ ಸುಳಿಗೆ ಸಿಲುಕಿದ ದಂಪತಿಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದ ಯಾದವಾಡ ಬ್ರಿಡ್ಜ್ ಬಳಿ ನಡೆದಿದೆ. ಮುಧೋಳ ನಗರಕ್ಕೆ ಹೊಂದಿಕೊಂಡಿರುವ ಘಟಪ್ರಭಾ ನದಿ ಸೇತುವೆಗೆ ನೇಣುಬಿಗಿಕೊಂಡ ಜೋಡಿ ಜೀವಗಳು ಪ್ರಾಣ ಬಿಟ್ಟಿವೆ. ಮುಧೋಳ ನಗರದ ಯಾದವಾಡ ರಸ್ತೆಯಲ್ಲಿರುವ ಘಟಪ್ರಭಾ ಸೇತುವೆಯ ಕಬ್ಬಿಣದ ಪೈಪ್ ಗೆ ನೇಣು ಬಿಗಿದುಕೊಂಡು ಜೀವ ಬಿಟ್ಟಿದ್ದಾರೆ. ಮಲ್ಲಪ್ಪ ಲಾಳಿ (58 ) ಪತ್ನಿ ಮಹಾದೇವಿ ಲಾಳಿ (51) ಮೃತಪಟ್ಟ ದಂಪತಿಗಳು, ಇಬ್ಬರು ಮೂಲತಃ ಮುಧೋಳ ತಾಲೂಕಿನ ಸೊರಗಾವಿ ಗ್ರಾಮದವರು. ಕಳೆದ 15 ವರ್ಷಗಳಿಂದ ಮೆಟಗುಡ್ಡ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ರು. ಇವ್ರಿಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಇದಾನೆ. ಜೀವನೋಪಾಯಕ್ಕಾಗಿ ಸಣ್ಣದಾದ ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ನಡೆಸ್ತಿದ್ರು. ಇಬ್ಬರು ಹೆಣ್ಣುಮಕ್ಕಳ ಮದುವೆ, ಕೌಟುಂಬಿಕ ಅಡಚಣೆ ವ್ಯಾಪಾರಕ್ಕಾಗಿ ವಿವಿಧ ಖಾಸಗಿ ವ್ಯಕ್ತಿಗಳ ಬಳಿ ಕೈಗಡ ಸಾಲ ಮಾಡಿದ್ರು. ಸಾಲ ನೀಡಿದವರು ನಿತ್ಯ ಹಣ ವಾಪಸ್ ಕೊಡುವಂತೆ ಮನೆ ಬಳಿ ಬರ್ತಿದ್ರು. ಇದರಿಂದ ದಿಕ್ಕು ತೋಚದ ದಂಪತಿಗಳು ನೇಣಿಗೆ ಶರಣಾಗಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬ್ಯಾಂಕ್ ಸೇರಿ 20 ಜನರ ಬಳಿ ಸುಮಾರು ೧೦ ರಿಂದ ೧೫ ಲಕ್ಷ ಸಾಲ ಇತ್ತು ಅಂತ ತಿಳಿದುಬಂದಿದೆ. ಮೃತರಿಗೆ ಯಾವುದೇ ಆಸ್ತಿಪಾಸ್ತಿ ಇಲ್ಲ. ಕೇವಲ ಕಿರಾಣಿ ಅಂಗಡಿ ವ್ಯಾಪಾರದಿಂದ ತಿಂಗಳಿಗೆ 20 ಸಾವಿರ ಆದಾಯ ಬರ್ತಿತ್ತು. ಆದರೆ ಜೀವನ ನಿರ್ವಹಣೆ ಸಾಲದ ಬಡ್ಡಿ ಕಟ್ಟೋದಕ್ಕೂ ಆಗುತ್ತಿರಲಿಲ್ಲ ಹೀಗಾಗಿ ಸಾಕಷ್ಟು ನೊಂದಿದ್ರು. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದ ದಂಪತಿ, ಡೆತ್ ನೋಟ್ ನಲ್ಲಿ ಯಾರದ್ದೂ ಅಂತ ಸಾಲ ತೀರಿಸೋದು. ಸಾಲ ಕೊಟ್ಟವರು ಮನೆಗೆ ಬಂದು ಸಾಲದ ಹಣ ಕೊಡಿ ಎಂದು ಕೇಳ್ತಿದ್ದಾರೆ. ಮಾನಸಿಕ ಹಿಂಸೆಯಾಗ್ತಿದೆ.
ಸಾಲ ತೀರಿಸೋದಕ್ಕೆ ಆಗ್ತಿಲ್ಲ. ಅದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಳ್ತಿದ್ದೇವೆ. ನಾವು ಯಾರ ಮೇಲೂ ಆರೋಪ ಮಾಡೋದಿಲ್ಲ ಎಂದು ಬರೆದು, ಮಕ್ಕಳಿಗೆ ಕ್ಷಮಿಸಿ ಎಂದು ಬರೆದು ಸಹಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದ ಲೋಕಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಸದ್ಯ ಬ್ಯಾಂಕ್ ಹಾಗೂ ಕೈಸಾಲ ಎಂದು ತಿಳಿದು ಬಂದಿದೆ. ಮೈಕ್ರೋಫೈನಾನ್ಸ್ ಸಾಲದ ಕಿರುಕುಳ ಕಂಡುಬಂದಿಲ್ಲ. ಯಾರಿಂದ ಕಿರುಕುಳ ಆಗಿದೆ,ಎಷ್ಟು ಸಾಲವಿತ್ತು ಎಂಬ ಬಗ್ಗೆ ಕುಟುಂಬಸ್ಥರ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳೋದಾಗಿ ಪೊಲೀಸರು ತಿಳಿಸಿದ್ದಾರೆ.
ಯಾರ ಮಧ್ಯಸ್ಥಿಕೆ ಬೇಕಿಲ್ಲ,ಪಿಓಕೆ ಮರಳಿಸಬೇಕು ಪ್ರಧಾನಿ ಮೋದಿ ಸ್ಪಷ್ಟ ಸಂದೇಶ
ಮರಳು ತುಂಬಿದ ಟಿಪ್ಪರಗೆ ಒಂದು ಜೀವ ಬಲಿ
ಹಳೆ ಬಾಗಲಕೋಟೆಯಲ್ಲಿ ಯುವಕನಿಗೆ ಚಾಕು ಇರಿತ
ಜಗತ್ತಿಗೆ ಇಂದು ಭಾರತದ ಶಕ್ತಿ ಸಾಮರ್ಥ್ಯದ ಅರಿವು:ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ
ಸರ್ಕಾರದ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು
ಹಸೆ ಮಣೆ ಏರುವ ಮೊದಲೇ ಪೆಟ್ರೋಲ್ ದಾಳಿಗೆ ಒಳಗಾದ ಯುವತಿಯ ಕರುಣಾಜನಕ ಕಥೆ ಇದು
ಮಕ್ಕಳ ಮದುವೆಗೆ ತೆಗೆದ ಸಾಲದ ಶೂಲಕ್ಕೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು
ಕೈಗಾರಿಕೆ ಸ್ಥಾಪನೆಗೆ ಧೈರ್ಯ, ಪರಿಶ್ರಮ ಮುಖ್ಯ : ಡಿಸಿ ಜಾನಕಿ