by 1 on | 2024-09-30 14:48:53 Last Updated by 1 on2026-01-01 04:02:41
Share: Facebook | Twitter | Whatsapp | Linkedin | Visits: 1556
ಹೆಣ್ಮಕ್ಕಳೇ ಹುಟ್ಟಿದ್ರು ಅಂತಾ ಹೆತ್ತವ್ರನ್ನು ಹೀಯಾಳಿಸಿದ ಜನರೆದರು ಮಗಳೊಬ್ಬಳು ತಲೆ ಎತ್ತಿ ಮೆರೆಸಿದ್ದಾಳೆ. ಹೌದು ತೋಟಗಾರಿಕೆ ಬಿ.ಎಸ್.ಸಿ(ಹಾನ್ಸ) ವಿಭಾಗದಲ್ಲಿ 16 ಚಿನ್ನದ ಪದಕಗಳನ್ನು ಪಡೆಯುವುದರ ಮೂಲಕ ಬೀದರ ಮೂಲದ ವಿದ್ಯಾರ್ಥಿನಿ ಅಮೂಲ್ಯ ಸಂಗಪ್ಪ ಪಾಟೀಲ್ ಚಿನ್ನದ ಹುಡುಗಿಯಾಗಿ ಹೊರ ಹೊಮ್ಮಿದ್ದಾಳೆ. ಹೌದು
ಬಾಗಲಕೋಟೆಯಲ್ಲಿರುವ ರಾಜ್ಯದ ಏಕೈಕ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 13ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ 16 ಚಿನ್ನದ ಪದಕ ಬಾಚಿದ ಸಾಧಕಿ ಅಮೂಲ್ಯ ಪಾಟೀಲ್ ವಿದ್ಯಾರ್ಥಿನಿಗೆ ಪದವಿ ಪ್ರಧಾನ ಮಾಡಲಾಯಿತು. ಒಟ್ಟು ಚಿನ್ನದ ಪದಕ ಪಡೆದ 21 ಜನ ವಿದ್ಯಾರ್ಥಿಗಳಲ್ಲಿ ಅಮೂಲ್ಯ ಪಾಟೀಲ್ ಅತೀ ಹೆಚ್ಚು 16 ಚಿನ್ನದ ಪದಕಗಳನ್ನು ಪಡೆಯುವುದರ ಮೂಲಕ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾಳೆ. ಮೂಲತಃ ಬೀದರ ಜಿಲ್ಲೆಯ ವಿದ್ಯಾರ್ಥಿನಿ ಅಮೂಲ್ಯ ಪಾಟೀಲ್ ಅವರ ತಂದೆ ಬೀದರನ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು,ತಾಯಿ ಸವಿತಾ ಅವರು ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಮಗಳ ಸಾಧನೆಗೆ ತಾಯಿ ಹೆಮ್ಮೆ ಪಟ್ಟರೆ, ಹೆಮ್ಮೆ ಪಟ್ಟ ತಾಯಿಯನ್ನು ನೋಡಿ ಮಗಳು ಭಾವುಕರಾದ್ರು. ಇದೇ ವೇಳೆ ಮಾಧ್ಯಗಳೊಂದಿಗೆ ಮಾತನಾಡಿರುವ ವಿದ್ಯಾರ್ಥಿನಿ ಅಮೂಲ್ಯ ಪಾಟೀಲ್ ನಿರಂತರ ಓದು,ಸತತ ಪರಿಶ್ರಮ ಹಾಗೂ ಪೋಷಕರ,ಉಪನ್ಯಾಸಕರ ಬೆಂಬಲದಿಂದ ಈ ಸಾಧನೆ ಮಾಡುವುದಕ್ಕೆ ಸಾಧ್ಯವಾಯಿತೆಂದು ತಮ್ಮ ಸಂತೋಷವನ್ನ ಹಂಚಿಕೊಂಡಿದ್ದು, ಮುಂದೆ ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆ ಬಿಚ್ಚಿಟ್ಟರು...
ಯಾರ ಮಧ್ಯಸ್ಥಿಕೆ ಬೇಕಿಲ್ಲ,ಪಿಓಕೆ ಮರಳಿಸಬೇಕು ಪ್ರಧಾನಿ ಮೋದಿ ಸ್ಪಷ್ಟ ಸಂದೇಶ
ಮರಳು ತುಂಬಿದ ಟಿಪ್ಪರಗೆ ಒಂದು ಜೀವ ಬಲಿ
ಹಳೆ ಬಾಗಲಕೋಟೆಯಲ್ಲಿ ಯುವಕನಿಗೆ ಚಾಕು ಇರಿತ
ಜಗತ್ತಿಗೆ ಇಂದು ಭಾರತದ ಶಕ್ತಿ ಸಾಮರ್ಥ್ಯದ ಅರಿವು:ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ
ಸರ್ಕಾರದ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು
ಹಸೆ ಮಣೆ ಏರುವ ಮೊದಲೇ ಪೆಟ್ರೋಲ್ ದಾಳಿಗೆ ಒಳಗಾದ ಯುವತಿಯ ಕರುಣಾಜನಕ ಕಥೆ ಇದು
ಮಕ್ಕಳ ಮದುವೆಗೆ ತೆಗೆದ ಸಾಲದ ಶೂಲಕ್ಕೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು
ಕೈಗಾರಿಕೆ ಸ್ಥಾಪನೆಗೆ ಧೈರ್ಯ, ಪರಿಶ್ರಮ ಮುಖ್ಯ : ಡಿಸಿ ಜಾನಕಿ