ಬ್ರೇಕಿಂಗ್ ನ್ಯೂಸ್ ಬ್ರೇಕಿಂಗ್ ನ್ಯೂಸ್

ನಾಗರಿಕರ ರಕ್ಷಣೆ:ಜಿಲ್ಲೆಯಲ್ಲಿ ಮೇ.12ರಂದು ಮಾಕ್ ಡ್ರಿಲ್

by 1 on | 2025-05-11 15:08:35 Last Updated by 1 on2026-01-01 06:00:40

Share: Facebook | Twitter | Whatsapp | Linkedin | Visits: 215


ನಾಗರಿಕರ ರಕ್ಷಣೆ:ಜಿಲ್ಲೆಯಲ್ಲಿ ಮೇ.12ರಂದು ಮಾಕ್ ಡ್ರಿಲ್
ಮಾಕ್ ಡ್ರಿಲ್ ಗೆ ಸಿದ್ಧತೆ ಮಾಡಿಕೊಳ್ಳಿ:ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಸೂಚನೆ

https://public.app/video/sp_oj95hagixepa6?utm_medium=android&utm_source=share


ಬಾಗಲಕೋಟೆ:ಕರ್ನಾಟಕ ರಾಜ್ಯ ಸರಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಮೇ 12 ರಂದು ಬೆಳಿಗ್ಗೆ 9.30 ಗಂಟೆಗೆ ನಾಗರಿಕ ಸುರಕ್ಷತಾ ಕುರಿತು ಮಾಕ್ ಡ್ರಿಲ್ ನಡೆಸಲಾಗುತ್ತಿದೆ ಎಂದು ಅಪರ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ತಿಳಿಸಿದರು.

          ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ಮಾಕ್ ಡ್ರೀಲ್ ನಡೆಸುವ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ನಾಗರಿಕ ಸುರಕ್ಷತಾ ತಾಲೀಮು ನಡೆಸುವ ಮೂಲಕ ತುರ್ತು ಪರಿಸ್ಥಿತಿ ಎದುರಾದ ವೇಳೆ ಸಾರ್ವಜನಿಕರು ಹೇಗೆ ತಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು.

           ಜಿಲ್ಲಾಡಳಿತ, ಪೊಲೀಸ್, ಅಗ್ನಿಶಾಮಕದಳ, ಗೃಹರಕ್ಷಕದಳ, ಟ್ರಾಪಿಕ್, ಎನ್.ಸಿ.ಸಿ ಸೇರಿದಂತೆ ಇತರೆ ಇಲಾಖೆಗಳ ಸಹಯೋಗದಲ್ಲಿ ಮಾಕ್ ಡ್ರಿಲ್ ಹಮ್ಮಿಕೊಳ್ಳಲಾಗುತ್ತಿದೆ ಎಂದ ಅವರು ಮಾಕ್ ಡ್ರಿಲ್‍ಗೆ ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಯಾವುದೇ ರೀತಿಯಲ್ಲಿ ಯಾರಿಗೂ ಅಪಾಯವಾಗದಂತೆ ಎಚ್ಚರಿಕಾ ಕ್ರಮಗಳನ್ನು ಕೈಗೊಂಡು ಮಾಕ್ ಡ್ರೀಲ್ ಯಶಸ್ವಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತ ಭವನದಲ್ಲಿ ಸೂಕ್ತವಾದ ಜಾಗವನ್ನು ನಿಗದಿಪಡಿಸಿಕೊಂಡು ಅಗತ್ಯವಾದ ಮಾನವ ಸಂಪನ್ಮೂಲ, ಸೈರನ್, ಕಂಟ್ರೋಲ್ ರೂಮ್, ಅಂಬುಲೆನ್ಸ್, ಅಗ್ನಿಶಾಮಕ ವಾಹನ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ತಿಳಿಸಿದರು.

           ಸಂಕಷ್ಟ ಪರಿಸ್ಥಿತಿಯಲ್ಲಿ ವ್ಯವಸ್ಥೆ ನಮ್ಮ ರಕ್ಷಣೆಗೆ ದಾವಿಸಲಿದೆ ಎಂಬ ವಿಶ್ವಾಸವನ್ನು ಜನರಲ್ಲಿ ಮೂಡುವಂತೆ ಯಶಸ್ವಿಯಾಗಿ ಮಾಕ್ ಡ್ರಿಲ್ ನಡೆಸಲು ತಿಳಿಸಿದರು. ಮಾಕ್ ಡ್ರೀಲ್‍ನಲ್ಲಿ ಸೈರನ್ ಹಾಕುವ ಮೂಲಕ ಜನರು ಸುರಕ್ಷಿತ ಸ್ಥಳಕ್ಕೆ ದಾವಿಸುವುದು, ನಾಗರಿಕ ರಕ್ಷಣಾ ಸಿಬ್ಬಂದಿ, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾಗುವುದು, ಬೆಂಕಿ ನಂದಿಸುವುದು, ಕಟ್ಟಡ ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಿ, ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸುವುದು ಹೀಗೆ ಹತ್ತು ಹಲವು ಕಾರ್ಯಾಚರಣೆಯ ಅಣಕು ಪ್ರದರ್ಶನ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲು ತಿಳಿಸಿದರು. 

          ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ, ಎನ್.ಸಿ.ಸಿ ಕಮಾಂಡ ಅಧಿಕಾರಿ ಮಾಚೇಂದ್ರನಾಥ ಪಾಟೀಲ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರಕಾಶ ಪವಾರ, ಜಿಲ್ಲಾ ಗೃಹರಕ್ಷಕದಳದ ಅಧಿಕಾರಿ ಎ.ಎಲ್.ಸಾಹುಕಾರ, ಜಿಲ್ಲಾ ಸಂಚಾರಿ ಅಧಿಕಾರಿ ರವಿ ಪವಾರ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ದಯಾನಂದ ಕರೇನ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Search
Most Popular
ಒಂದು ಕೋಟಿ ರೂಪಾಯಿ ವಂಚನೆ ಪ್ರಕರಣ ಶ್ರೀ ರಾಮಾರೂಢ ಸ್ವಾಮೀಜಿ ಹೇಳಿದ್ದೇನು?
ಹದಿನಾರು ಚಿನ್ನದ ಪದಕ ಬಾಚಿದ ಚಿನ್ನದ ಹುಡುಗಿ
ತೋಟಗಾರಿಕಾ ಬಿ.ಎಸ್.ಸಿ ಯಲ್ಲಿ 16 ಚಿನ್ನದ ಪದಕ‌ಬಚಿದ ಚಿನ್ನದ ಹುಡುಗಿ
ಹಕ್ಕು ಪತ್ರಕ್ಕೆ ಸಿದ್ಧರಾಮಯ್ಯನವರನ್ನ ಕೇಳಬೇಕಂತಾರೆ ಪಿಡಿಓ:ಕೊಣ್ಣೂರು ಗ್ರಾಮಸ್ಥರು
ಅನ್ಯಗ್ರಹ ಜೀವಿಗಳ ಬಗ್ಗೆ ನಾಸಾ ಸ್ಪೋಟಕ ಮಾಹಿತಿ..!ಏನಾಗಲಿದೆ 2030ರಲ್ಲಿ
ಶ್ರೀ ರಾಮಾರೂಢ ಸ್ವಾಮಿಜಿಗೆ ಕೋಟಿ ವಂಚನೆ:ಕಂತೆ ಕಂತೆ ಹಣ ಜಪ್ತಿ
ರಾಮಾರೂಢ ಶ್ರೀಗಳಿಗೆ ವಂಚಿಸಿದವ ನನ್ನ ಸಹೋದರಿಗೆ ಕಾರು ಬೇಕಂತ ವಂಚಿಸಿದ್ದ
ಸಿಎಂ ಪತ್ನಿ ಮೂಡಾ ಸೈಟ ಹಿಂತಿರುಗಿಸಿದ್ದು ಯಾಕೆ ಗೊತ್ತಾ?ಆರ್.ಬಿ.ತಿಮ್ಮಾಪೂರ್
ಲಡ್ಡು ಮುತ್ಯಾರನ್ನ ಅವಮಾನಿಸಬೇಡಿ ಯೂಟ್ಮಯೂಬ್ಲ್ಯಾ ಸ್ಟಾರ್ ಬಾಗಲಕೋಟ ಮನವಿ
ದೇವರು ಹೆಂಗ‌ ಬರ್ತಾನ?ಬೆಂಕಿ ಬಬಲಾದಿ
ರೋಬೋ ತಂತ್ರಜ್ಞಾನದ ಮೂಲಕ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ ಡಾ.ಕಟ್ಟಿ ಆಸ್ಪತ್ರೆ
ಶ್ರೀ ಮುತ್ತಿನಕಂಠಿ ಹಿರೇಮಠದಲ್ಲಿ ಮನೆಮಾಡಿದ ನವರಾತ್ರಿ ಹಬ್ಬದ ಸಂಭ್ರಮ
Indo Israel Rasavari Project
ಕೈ ಯಲ್ಲಿ ಖಡ್ಗ ಹಿಡಿದು ದುರ್ಗಾ ಮಾತಾ ದೌಡನಲ್ಲಿ ಭಾಗಿಯಾದ ದುರ್ಗೆಯ ಭಕ್ತರು
ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮರುಜೀವ ಕೊಟ್ಟ ಮಾಜಿ ಸಚಿವ ಎಸ್.ಆರ್.ಪಾಟೀಲ್
ಬಾಗಲಕೋಟೆ ಜಿಲ್ಲೆಯ ಕಂಪ್ಲೀಟ ರೌಂಡಪ್
BAGALKOT DAILY ROUNDUP 17-18-2024
BAGALKOT DAILY ROUNDUP 19-18-2024
BAGALKOT DAILY ROUNDUP 22-10-2024
ಎಂ.ಎಲ್.ಸಿ. ಪಿ.ಹೆಚ್.ಪೂಜಾರ ವಿರುದ್ದ ಬಿಜೆಪಿ ಹಿರಿಯ ಮುಖಂಡರ ವಾಗ್ದಾಳಿ
ಮೂವತ್ತರ ಪಾಕ್ ಯುವಕನೊಂದಿಗೆ ಭಾರತೀಯ ರಾಜತಾಂತ್ರಿಕ ಅಧಿಕಾರಿಯ ಲವ್ ಸ್ಟೋರಿ, ದೇಶಕ್ಕೆ ದ್ರೋಹ
ಬಾಗಲಕೋಟೆ ರೈಲು ನಿಲ್ದಾಣದ ಉದ್ಘಾಟನೆ
ಆರ್.ಸಿ.ಬಿ ಅಭಿಮಾನಿಗಳಿಂದ ಗೆಲುವಿಗೆ ಪೂಜೆ
ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಪ್ರಹಲ್ಲಾದ ಜೋಶಿ
ಯುವಕರನ್ನ ನಾಚಿಸುವಂತಿದೆ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳ ಯೋಗ
ಮುಂದಿನ ಮುಖ್ಯಮಂತ್ರಿ ಬಾಲಚಂದ್ರ ಜಾರಕಿಹೊಳಿ

Leave a Comment