ಬ್ರೇಕಿಂಗ್ ನ್ಯೂಸ್ ಬ್ರೇಕಿಂಗ್ ನ್ಯೂಸ್

ತುರ್ತು ಪರಿಸ್ಥಿತಿ ಎದುರಿಸಲು ಬಾಗಲಕೋಟೆ ಜಿಲ್ಲಾಡಳಿತ ಸನ್ನದ್ದ : ಡಿಸಿ ಜಾನಕಿ

by 1 on | 2025-05-11 16:35:46

Share: Facebook | Twitter | Whatsapp | Linkedin | Visits: 154


ತುರ್ತು ಪರಿಸ್ಥಿತಿ ಎದುರಿಸಲು ಬಾಗಲಕೋಟೆ ಜಿಲ್ಲಾಡಳಿತ ಸನ್ನದ್ದ : ಡಿಸಿ ಜಾನಕಿ
ಮೂರು ತಿಂಗಳಿಗಾಗುವಷ್ಟು ಆಹಾರ ಧಾನ್ಯಗಳ ಸಂಗ್ರಹ,ಔಷಧಿ ಸಂಗ್ರಹ: ಡಿಸಿ ಜಾನಕಿ ಕೆ.ಎಂ

ವೀಡಿಯೋ ಕೂಡ ಇದೆ click ಮಾಡಿ ನೋಡಬಹುದು



ಬಾಗಲಕೋಟೆ: ಯುದ್ದದಂತಹ ಸನ್ನಿವೇಶ ಹಾಗೂ ತುರ್ತು ಪರಿಸ್ಥಿತಿ ಎದುರಾದಲ್ಲಿ ಸಾರ್ವಜನಿಕರ ರಕ್ಷಣೆಗೆ ಜಿಲ್ಲಾಡಳಿತ ಸನ್ನದ್ದವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.

          ರವಿವಾರ ಯುದ್ದ ಅಥವಾ ಇನ್ನೀತರ ವಿಪತ್ತು ನಿರ್ವಹಣೆ ಕುರಿತು ತುರ್ತು ಕ್ರಮಕೈಗೊಳ್ಳಲು ಗೂಗಲ್ ಮೀಟ್ ಮೂಲಕ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯದ ಮುಖ್ಯಮಂತ್ರಿಗಳು ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯೊಂದಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಈಗಾಗಲೇ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

           ಮೂರು ತಿಂಗಳವರೆಗೆ ಬೇಕಾಗುವಷ್ಟು ಆಹಾರಧಾನ್ಯಗಳ ದಾಸ್ತಾನು ಇಡಲಾಗುತ್ತಿದೆ. ಅಲ್ಲದೇ ಅಕ್ರಮವಾಗಿ ದಾಸ್ತಾನು ಹಾಗೂ ಕಾಳಸಂತೆಯಲ್ಲಿ ಮಾರಾಟವಾಗದಂತೆ ಹೆಚ್ಚಿನ ನಿಗಾ ವಹಿಸಲು ಆಹಾರ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಕುಡಿಯಲು ನೀರು ಹಾಗೂ ಆರೋಗ್ಯ ಸೌಲಭ್ಯಕ್ಕಾಗಿ ಬೆಡ್‍ಗಳ ಹಾಗೂ ಔಷಧಿಗಳ ದಾಸ್ತಾನು ಇಡಲು ತಿಳಿಸಲಾಗಿದೆ. ತುರ್ತು ವಾಹನಗಳಿಗೆ ಬೇಕಾಗುವ ಇಂಧನ ವ್ಯವಸ್ಥೆ ಸಹ ಮಾಡಿಕೊಳ್ಳಲಾಗುತ್ತಿದೆ. ಅಗ್ನಿಶಾಮಕ ದಳದವರು ದಿನದ 24 ಗಂಟೆಗಳ ಕಾಲ ಸನ್ನದ್ದ ಸ್ಥಿತಿಯಲ್ಲಿರಲು ಸೂಚಿಸಲಾಗಿದೆ.

            ಸಾಮಾಜಿಕ ತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳ ಮೇಳ ನಿರಂತರ ನಿಗಾವಹಿಸಲಾಗುತ್ತಿದ್ದು, ವದಂತಿ ಹರಡುವುವವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ವದಂತಿಗಳಿಗೆ ಕಿವಿಗೊಡದೇ ಸಾರ್ವಜನಿಕರು ಸೂಕ್ತ ತಿಳುವಳಿಕೆ ಹೊಂದುವ ಅಗತ್ಯವಿದೆ. ದಿನದ 24 ಗಂಟೆಗಳ ಕಾಲ ಜಿಲ್ಲಾ ಹಾಗೂ ತಾಲೂಕಾ ಮಟ್ಟದಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರಯಲಾಗಿದೆ. ಸಹಾಯವಾಣಿ ಕೇಂದ್ರಗಳು ವ್ಯವಸ್ಥಿತವಾಗಿ ನಡೆಯಲು ಜಿಲ್ಲಾ ಹಾಗೂ ತಾಲೂಕಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲು ಸೂಚಿಸಲಾಗಿದೆ. ಸಹಾಯವಾಣಿ ಕೇಂದ್ರದ ಪ್ರತಿದಿನದ ವರದಿಯನ್ನು ನೀಡಲು ಸೂಚನೆ ನೀಡಲಾಗಿದೆ ಎಂದರು.

           ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ನೀಡಲಾಗಿರುವ ಮಾರ್ಗಸೂಚಿಗಳನ್ನು ಗ್ರಾಮ ಪಂಚಾಯತ ಮಟ್ಟದಲ್ಲಿಯೂ ತಲುಪಿಸುವ ಕೆಲಸವಾಗಬೇಕು. ತುರ್ತು ಪರಿಸ್ಥಿತಿಯಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಮಿಲಿಟರಿಯಲ್ಲಿ ಸೈನಿಕರು ಯಾವ ಸ್ಥಿತಿಯಲ್ಲಿ ಇದ್ದಾರೆ ಅದೇ ಸ್ಥಿತಿಯಲ್ಲಿ ನಾವು ಇದ್ದೇವೆ ಎಂಬ ಭಾವನೆ ಇಟ್ಟುಕೊಂಡು ಕೆಲಸ ಮಾಡಲು ತಿಳಿಸಿದರು. ಜಿಲ್ಲೆಯ ವಿವಿದೆಡೆ ಮಾಕ್ ಡ್ರೀಲ್ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

            ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಸಂತೋಷ ಜಗಲಾಸರ, ಶ್ವೇತಾ ಬೀಡಿಕರ, ನಗರಾಭಿವೃದ್ದಿ ಕೋಶದ ಪ್ರಭಾರಿ ಯೋಜನಾ ನಿರ್ದೇಶಕ ಸುರಖೋಡ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.


Search
Most Popular
ಒಂದು ಕೋಟಿ ರೂಪಾಯಿ ವಂಚನೆ ಪ್ರಕರಣ ಶ್ರೀ ರಾಮಾರೂಢ ಸ್ವಾಮೀಜಿ ಹೇಳಿದ್ದೇನು?
ಹದಿನಾರು ಚಿನ್ನದ ಪದಕ ಬಾಚಿದ ಚಿನ್ನದ ಹುಡುಗಿ
ತೋಟಗಾರಿಕಾ ಬಿ.ಎಸ್.ಸಿ ಯಲ್ಲಿ 16 ಚಿನ್ನದ ಪದಕ‌ಬಚಿದ ಚಿನ್ನದ ಹುಡುಗಿ
ಹಕ್ಕು ಪತ್ರಕ್ಕೆ ಸಿದ್ಧರಾಮಯ್ಯನವರನ್ನ ಕೇಳಬೇಕಂತಾರೆ ಪಿಡಿಓ:ಕೊಣ್ಣೂರು ಗ್ರಾಮಸ್ಥರು
ಅನ್ಯಗ್ರಹ ಜೀವಿಗಳ ಬಗ್ಗೆ ನಾಸಾ ಸ್ಪೋಟಕ ಮಾಹಿತಿ..!ಏನಾಗಲಿದೆ 2030ರಲ್ಲಿ
ಶ್ರೀ ರಾಮಾರೂಢ ಸ್ವಾಮಿಜಿಗೆ ಕೋಟಿ ವಂಚನೆ:ಕಂತೆ ಕಂತೆ ಹಣ ಜಪ್ತಿ
ರಾಮಾರೂಢ ಶ್ರೀಗಳಿಗೆ ವಂಚಿಸಿದವ ನನ್ನ ಸಹೋದರಿಗೆ ಕಾರು ಬೇಕಂತ ವಂಚಿಸಿದ್ದ
ಸಿಎಂ ಪತ್ನಿ ಮೂಡಾ ಸೈಟ ಹಿಂತಿರುಗಿಸಿದ್ದು ಯಾಕೆ ಗೊತ್ತಾ?ಆರ್.ಬಿ.ತಿಮ್ಮಾಪೂರ್
ಲಡ್ಡು ಮುತ್ಯಾರನ್ನ ಅವಮಾನಿಸಬೇಡಿ ಯೂಟ್ಮಯೂಬ್ಲ್ಯಾ ಸ್ಟಾರ್ ಬಾಗಲಕೋಟ ಮನವಿ
ದೇವರು ಹೆಂಗ‌ ಬರ್ತಾನ?ಬೆಂಕಿ ಬಬಲಾದಿ
ರೋಬೋ ತಂತ್ರಜ್ಞಾನದ ಮೂಲಕ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ ಡಾ.ಕಟ್ಟಿ ಆಸ್ಪತ್ರೆ
ಶ್ರೀ ಮುತ್ತಿನಕಂಠಿ ಹಿರೇಮಠದಲ್ಲಿ ಮನೆಮಾಡಿದ ನವರಾತ್ರಿ ಹಬ್ಬದ ಸಂಭ್ರಮ
Indo Israel Rasavari Project
ಕೈ ಯಲ್ಲಿ ಖಡ್ಗ ಹಿಡಿದು ದುರ್ಗಾ ಮಾತಾ ದೌಡನಲ್ಲಿ ಭಾಗಿಯಾದ ದುರ್ಗೆಯ ಭಕ್ತರು
ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮರುಜೀವ ಕೊಟ್ಟ ಮಾಜಿ ಸಚಿವ ಎಸ್.ಆರ್.ಪಾಟೀಲ್
ಬಾಗಲಕೋಟೆ ಜಿಲ್ಲೆಯ ಕಂಪ್ಲೀಟ ರೌಂಡಪ್
BAGALKOT DAILY ROUNDUP 17-18-2024
BAGALKOT DAILY ROUNDUP 19-18-2024
BAGALKOT DAILY ROUNDUP 22-10-2024
ಎಂ.ಎಲ್.ಸಿ. ಪಿ.ಹೆಚ್.ಪೂಜಾರ ವಿರುದ್ದ ಬಿಜೆಪಿ ಹಿರಿಯ ಮುಖಂಡರ ವಾಗ್ದಾಳಿ
ಮೂವತ್ತರ ಪಾಕ್ ಯುವಕನೊಂದಿಗೆ ಭಾರತೀಯ ರಾಜತಾಂತ್ರಿಕ ಅಧಿಕಾರಿಯ ಲವ್ ಸ್ಟೋರಿ, ದೇಶಕ್ಕೆ ದ್ರೋಹ
ಬಾಗಲಕೋಟೆ ರೈಲು ನಿಲ್ದಾಣದ ಉದ್ಘಾಟನೆ
ಆರ್.ಸಿ.ಬಿ ಅಭಿಮಾನಿಗಳಿಂದ ಗೆಲುವಿಗೆ ಪೂಜೆ
ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಪ್ರಹಲ್ಲಾದ ಜೋಶಿ
ಯುವಕರನ್ನ ನಾಚಿಸುವಂತಿದೆ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳ ಯೋಗ
ಮುಂದಿನ ಮುಖ್ಯಮಂತ್ರಿ ಬಾಲಚಂದ್ರ ಜಾರಕಿಹೊಳಿ

Leave a Comment