by 1 on | 2025-07-03 21:04:07
Share: Facebook | Twitter | Whatsapp | Linkedin | Visits: 122
ಬಾಗಲಕೋಟೆ: ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಎಂಬ ಎರಡು ಸಂಘಟನೆಗಳ ಹೆಸರುಗಳನ್ನು ಅವ್ಯವಸ್ಥಿತವಾಗಿ ಬಳಸುವವರು ನಿಜವಾಗಿ ರೈತ ಸಂಘಕ್ಕೆ ಲಾಯಕ್ಕರೇ ಎಂಬುದನ್ನು ಸಾಬೀತು ಮಾಡಬೇಕು, ಎಂದು ರೈತ ಸಂಘದ ಬೀಳಗಿ ತಾಲೂಕು ಅಧ್ಯಕ್ಷ ಗಂಗಪ್ಪ ಮಾದರ ಕಿಡಿಕಾರಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ರೈತ ಸಂಘ ಒಂದು ಪ್ರತ್ಯೇಕ ಹಾಗೂ ಸರಿಯಾದ ಚಟುವಟಿಕೆ ನಡೆಸುವ ಸಂಘಟನೆ. ಹಸಿರು ಸೇನೆ ಮತ್ತೊಂದು ಸಂಘಟನೆಯಾಗಿದ್ದು, ಇಬ್ಬರ ನಡುವೆಯೂ ಗೊಂದಲ ಆಗುವಂತೆ ಹೆಸರು ಬಳಸಿ ರೈತರ ಮಧ್ಯೆ ದ್ವಂದ್ವ ಉಂಟು ಮಾಡಲಾಗುತ್ತಿದೆ ಎಂದರು.
ಸಿದ್ದಪ್ಪ ಬಳಗಾನೂರ ನೇತೃತ್ವದ ಕೆಲವರು ಕೆಲವು ಸಮಯದಲ್ಲಿ ತಮ್ಮನ್ನು ರಾಜ್ಯ ರೈತ ಸಂಘದವರು ಎಂದು ಹೇಳುತ್ತಾರೆ, ಮತ್ತೊಮ್ಮೆ ಹಸಿರು ಸೇನೆ ಎಂದು ಲೆಟರ್ ಪ್ಯಾಡ್‌ಗಳಲ್ಲಿ ಸಹಿ ಹಾಕುತ್ತಾರೆ ಎಂದು ಆರೋಪಿಸಿದರು. ಇದು ಎಷ್ಟರ ಮಟ್ಟಿಗೆ ಸರಿ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ರೈತ ಸಂಘದ ಕರ್ತವ್ಯ, ಎಂದು ಅವರು ಹೇಳಿದರು.
ಇಂತಹ ಅವ್ಯವಸ್ಥೆ ಮುಂದುವರಿದರೆ ಸಂಘಟನೆಯ ಶಿಸ್ತಿಗೆ ಧಕ್ಕೆ ಆಗಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ರೈತ ಸಂಘ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಲಿದೆ ಹಾಗೂ ತಕ್ಕ ರೀತಿಯಲ್ಲಿ ಪಾಠ ಕಲಿಸುತ್ತೆ ಎಂದು ಎಚ್ಚರಿಕೆ ನೀಡಿದರು.
ಯಾರ ಮಧ್ಯಸ್ಥಿಕೆ ಬೇಕಿಲ್ಲ,ಪಿಓಕೆ ಮರಳಿಸಬೇಕು ಪ್ರಧಾನಿ ಮೋದಿ ಸ್ಪಷ್ಟ ಸಂದೇಶ
ಮರಳು ತುಂಬಿದ ಟಿಪ್ಪರಗೆ ಒಂದು ಜೀವ ಬಲಿ
ಹಳೆ ಬಾಗಲಕೋಟೆಯಲ್ಲಿ ಯುವಕನಿಗೆ ಚಾಕು ಇರಿತ
ಜಗತ್ತಿಗೆ ಇಂದು ಭಾರತದ ಶಕ್ತಿ ಸಾಮರ್ಥ್ಯದ ಅರಿವು:ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ
ಸರ್ಕಾರದ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು
ಹಸೆ ಮಣೆ ಏರುವ ಮೊದಲೇ ಪೆಟ್ರೋಲ್ ದಾಳಿಗೆ ಒಳಗಾದ ಯುವತಿಯ ಕರುಣಾಜನಕ ಕಥೆ ಇದು
ಮಕ್ಕಳ ಮದುವೆಗೆ ತೆಗೆದ ಸಾಲದ ಶೂಲಕ್ಕೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು
ಕೈಗಾರಿಕೆ ಸ್ಥಾಪನೆಗೆ ಧೈರ್ಯ, ಪರಿಶ್ರಮ ಮುಖ್ಯ : ಡಿಸಿ ಜಾನಕಿ