by 1 on | 2025-07-06 16:19:43
Share: Facebook | Twitter | Whatsapp | Linkedin | Visits: 217
ಬಾಗಲಕೋಟೆಯ ನವನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ,ಭಾರತೀಯ ಜನ ಸಂಘದ ಸಂಸ್ಥಾಪಕರಾದ ರಾಷ್ಟ್ರಭಕ್ತ ಡಾ ಶಾಮ ಪ್ರಸಾದ್ ಮುಖರ್ಜಿ ಅವರ ಹುಟ್ಟುಹಬ್ಬ ಆಚರಿಸಲಾಯಿತು. ಭಾರತ ಮಾತೆ ಮತ್ತು ಡಾ ಶಾಮಾ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಶ್ರೀ P H ಪೂಜಾರ್ ಮಾತನಾಡಿ, ಡಾ ಶಾಮಾ ಪ್ರಸಾದ್ ಮುಖರ್ಜಿ ಅವರ ದೇಶಭಕ್ತಿ, ಪಕ್ಷ ಸಂಘಟನೆ, ಅವರ ತತ್ವ ಸಿದ್ಧಾಂತ, ಆರ್ಟಿಕಲ್ 370 ಅನ್ನು ಅವರು ವಿರೋಧಿಸಿದ್ದು, ಹಿಂದುತ್ವದ ಪ್ರತಿಪಾದನೆ, ಅವರು ಮಾಡಿದ ಹೋರಾಟಗಳ ಬಗ್ಗೆ ಮಾತನಾಡಿದರು. ಅವರ ಮಾರ್ಗದರ್ಶನ ಮತ್ತು ತತ್ವ ಸಿದ್ಧಾಂತಗಳ ಮೇಲೆ ನಡೆದುಕೊಂಡು ಬಿಜೆಪಿ ಬಂದಿದ್ದು, ಇಂದು ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷವಾಗಿದೆ ಎಂದರು. ದೋ ವಿಧಾನ, ದೋ ನಿಶಾನ, ದೋ ಪ್ರಧಾನ ನಹಿ ಚಲೆಗಾ ಎಂದು ಕಾಶ್ಮೀರ ನಲ್ಲಿ ಹೋರಾಟ ಮಾಡಿ ಅಲ್ಲಿಯೇ ಜೀವ ಬಿಟ್ಟ ವಿಚಾರಗಳನ್ನು ಪೂಜಾರ್ ಅವರು ಹೇಳಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕಾಂಬಳೆ, ಡಾ ಶೇಖರ್ ಮಾನೆ, ರಾಘು ನಾಗೂರ, ಚಂದ್ರಕಾಂತ ಕೇಸನೂರ, ರಾಜು ಚಿತ್ತವಾಡಗಿ, ಮಲ್ಲಿಕಾರ್ಜುನ ಭೂಸರಡ್ಡಿ,ಗಣಪತಿ ದುದಾನಿ, ನರೇಂದ್ರ ಕುಪ್ಪಸ್ತ್ , ರಾಜು ಶ್ರೀರಾಮ ಮತ್ತಿತರರು ಉಪಸ್ಥಿತರಿದ್ದರು.
ಯಾರ ಮಧ್ಯಸ್ಥಿಕೆ ಬೇಕಿಲ್ಲ,ಪಿಓಕೆ ಮರಳಿಸಬೇಕು ಪ್ರಧಾನಿ ಮೋದಿ ಸ್ಪಷ್ಟ ಸಂದೇಶ
ಮರಳು ತುಂಬಿದ ಟಿಪ್ಪರಗೆ ಒಂದು ಜೀವ ಬಲಿ
ಹಳೆ ಬಾಗಲಕೋಟೆಯಲ್ಲಿ ಯುವಕನಿಗೆ ಚಾಕು ಇರಿತ
ಜಗತ್ತಿಗೆ ಇಂದು ಭಾರತದ ಶಕ್ತಿ ಸಾಮರ್ಥ್ಯದ ಅರಿವು:ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ
ಸರ್ಕಾರದ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು
ಹಸೆ ಮಣೆ ಏರುವ ಮೊದಲೇ ಪೆಟ್ರೋಲ್ ದಾಳಿಗೆ ಒಳಗಾದ ಯುವತಿಯ ಕರುಣಾಜನಕ ಕಥೆ ಇದು
ಮಕ್ಕಳ ಮದುವೆಗೆ ತೆಗೆದ ಸಾಲದ ಶೂಲಕ್ಕೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು
ಕೈಗಾರಿಕೆ ಸ್ಥಾಪನೆಗೆ ಧೈರ್ಯ, ಪರಿಶ್ರಮ ಮುಖ್ಯ : ಡಿಸಿ ಜಾನಕಿ