by 1 on | 2025-08-23 15:40:53
Share: Facebook | Twitter | Whatsapp | Linkedin | Visits: 86
ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹಕ್ಕೆ ಮತ್ತೋರ್ವ ರೈತ ಬಲಿಯಾಗಿದ್ದು,ಪ್ರವಾಹದಿಂದ ತೀರಿಹೋದವರ ಸಂಖ್ಯೆ ಎರಡಕ್ಕೆ ಏರಿದೆ.ಹೌದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ನದಿಯ ದಂಡೆಯಲ್ಲಿದ್ದ ಪಂಪಸೆಟ್ ತೆಗೆಯಲು ಹೋಗಿ ಸಂಗಪ್ಪ ಮರನೂರು(26) ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾಗಿ ಮಾಹಿತಿ ಲಭ್ಯವಾಗಿದೆ.ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆದ ಪರಿಣಾಮವಾಗಿ ಕೃಷ್ಣ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.ನದಿಯ ನೀರಿನ ರಭಸಕ್ಕೆ ಪಂಪ ಸೆಟ್ ಕೊಚ್ಚಿ ಹೋಗಬಾರದೆಂದು ರೈತ ಸಂಗಪ್ಪ ಅದನ್ನು ತೆಗೆಯಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇನ್ನ ಕಳೆದ ಎರಡು ದಿನಗಳ ಹಿಂದೆ ಇದೇ ರೀತಿ ಬಾದಾಮಿ ತಾಲೂಕಿನಲ್ಲಿ ಇದೇ ರೀತಿ ಪಂಪಸೆಟ್ ತರಲು ಹೋದ ರೈತ ಮಲಪ್ರಭ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಯಾರ ಮಧ್ಯಸ್ಥಿಕೆ ಬೇಕಿಲ್ಲ,ಪಿಓಕೆ ಮರಳಿಸಬೇಕು ಪ್ರಧಾನಿ ಮೋದಿ ಸ್ಪಷ್ಟ ಸಂದೇಶ
ಮರಳು ತುಂಬಿದ ಟಿಪ್ಪರಗೆ ಒಂದು ಜೀವ ಬಲಿ
ಹಳೆ ಬಾಗಲಕೋಟೆಯಲ್ಲಿ ಯುವಕನಿಗೆ ಚಾಕು ಇರಿತ
ಜಗತ್ತಿಗೆ ಇಂದು ಭಾರತದ ಶಕ್ತಿ ಸಾಮರ್ಥ್ಯದ ಅರಿವು:ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ
ಸರ್ಕಾರದ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು
ಹಸೆ ಮಣೆ ಏರುವ ಮೊದಲೇ ಪೆಟ್ರೋಲ್ ದಾಳಿಗೆ ಒಳಗಾದ ಯುವತಿಯ ಕರುಣಾಜನಕ ಕಥೆ ಇದು
ಮಕ್ಕಳ ಮದುವೆಗೆ ತೆಗೆದ ಸಾಲದ ಶೂಲಕ್ಕೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು
ಕೈಗಾರಿಕೆ ಸ್ಥಾಪನೆಗೆ ಧೈರ್ಯ, ಪರಿಶ್ರಮ ಮುಖ್ಯ : ಡಿಸಿ ಜಾನಕಿ