by 1 on | 2025-09-12 16:51:44
Share: Facebook | Twitter | Whatsapp | Linkedin | Visits: 237
ಸ್ನೇಹಿತರ ಎಣ್ಣೆ ಪಾರ್ಟಿ ಬಳಿಕ,ಓರ್ವ ಸ್ನೇಹಿತ ಶವವಾಗಿ ಪತ್ತೆಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ. ಸ್ನೇಹಿತನೇ ಸ್ನೇಹಿತನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಕೊಲೆಯಾದ ವ್ಯಕ್ತಿಯನ್ನ ಬಸಯ್ಯ ಮಠಪತಿ(34) ಎಂದು ಗುರ್ತಿಸಲಾಗಿದೆ.ಆರೋಪಿ ಬಸಯ್ಯ ನಿಂಗನೂರ(24) ಪರಾರಿಯಾಗಿದ್ದಾನೆ.
ಕಳೆದ ಸೆ.11.ರ ರಾತ್ರಿ ಊರಹೊರಗಡೆ ಭರ್ಜರಿ ಪಾರ್ಟಿ ಮಾಡಿದ ಸ್ನೇಹಿತರು ತೇಲಾಡುತ್ತ ಮನೆ ಕಡೆಗೆ ಹೊರಟ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.ಇಬ್ಬರು ಕೂಡ ಬಸಯ್ಯ ಮಠಪತಿ ಅವರ ಖಾಲಿ ಇರುವ ಮನೆಗೆ ಹೋಗಿದ್ದಾರೆ.ನಂತರ ಬೆಳಗಾಗುವಷ್ಟರಲ್ಲಿ ಬಸಯ್ಯ ಮಠಪತಿ(33) ಶವವಾಗಿ ಪತ್ತೆಯಾಗಿದ್ದಾನೆ.
ಬಸಯ್ಯ ನಿಂಗನೂರ(24) ನಶೆಯಲ್ಲಿ ತೇಲುತ್ತಿದ್ದ ಸ್ನೇಹಿತ ಬಸಯ್ಯ ಮಠಪತಿಯನ್ನ ಹಿಗ್ಗಾಮುಗ್ಗಾ ಥಳಿಸಿ ನಂತರ ಬೆಲ್ಟನಿಂದ ಬಿಗಿದು ಕೊಲೆ ಮಾಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಬೆಳಗಾಗುವಷ್ಟರಲ್ಲಿ ಒಬ್ನ ಸ್ನೇಹಿತ ಶವವಾಗಿ ಪತ್ತೆಯಾಗಿದ್ದರೆ, ಇನ್ನೊಬ್ಬ ಸ್ನೇಹಿತ ಬೈಕ್ ಸಮೇತ ಎಸ್ಕೇಪ್ ಆಗಿದ್ದಾನೆ.
ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನ ಮುಂದುವರೆಸಿದ್ದಾರೆ.
ಆರೋಪಿ ಸ್ಥಾನದಲ್ಲಿರುವ ಬಸಯ್ಯ ನಿಂಗನೂರನನ್ನ ಬಂಧಿಸಲು ಪೊಲೀಸರು ಬಲೆ ಬೀಸಿದ್ದು,ಆರೋಪಿಯ ಬಂಧನದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಯಾರ ಮಧ್ಯಸ್ಥಿಕೆ ಬೇಕಿಲ್ಲ,ಪಿಓಕೆ ಮರಳಿಸಬೇಕು ಪ್ರಧಾನಿ ಮೋದಿ ಸ್ಪಷ್ಟ ಸಂದೇಶ
ಮರಳು ತುಂಬಿದ ಟಿಪ್ಪರಗೆ ಒಂದು ಜೀವ ಬಲಿ
ಹಳೆ ಬಾಗಲಕೋಟೆಯಲ್ಲಿ ಯುವಕನಿಗೆ ಚಾಕು ಇರಿತ
ಜಗತ್ತಿಗೆ ಇಂದು ಭಾರತದ ಶಕ್ತಿ ಸಾಮರ್ಥ್ಯದ ಅರಿವು:ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ
ಸರ್ಕಾರದ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು
ಹಸೆ ಮಣೆ ಏರುವ ಮೊದಲೇ ಪೆಟ್ರೋಲ್ ದಾಳಿಗೆ ಒಳಗಾದ ಯುವತಿಯ ಕರುಣಾಜನಕ ಕಥೆ ಇದು
ಮಕ್ಕಳ ಮದುವೆಗೆ ತೆಗೆದ ಸಾಲದ ಶೂಲಕ್ಕೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು
ಕೈಗಾರಿಕೆ ಸ್ಥಾಪನೆಗೆ ಧೈರ್ಯ, ಪರಿಶ್ರಮ ಮುಖ್ಯ : ಡಿಸಿ ಜಾನಕಿ