by 1 on | 2025-09-23 12:35:57
Share: Facebook | Twitter | Whatsapp | Linkedin | Visits: 102
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಗೆ ಮನೆ ಹಾಗೂ ಬೆಳೆ ಹಾನಿ ಸಂಭವಿಸಿದ್ದು,ಹಾನಿಯಾದ ಪ್ರದೇಶಕ್ಕೆ ಶಾಸಕರು ಹಾಗೂ ಹಟ್ಟಿ ಚಿನ್ನದ ಗಣಿ ನಿಗಮ ನಿ,ಅಧ್ಯಕ್ಷರು ಜೆ ಟಿ ಪಾಟೀಲ ಭೇಟಿ ನೀಡಿ ವೀಕ್ಷಿಸಿದರು.
ಬಳಿಕ ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ 25 ವರ್ಷಗಳಲ್ಲಿ ಕಂಡರಿಯದ ರೀತಿಯಲ್ಲಿ ಮಳೆಯಾಗಿದೆ 7.3 ಎಂ ಎಂ ಮಳೆ ಆಗಬೇಕಿತ್ತು,19.4 ಎಂ ಎಂ ಮಳೆ ಆಗಿದೆ,ಬೀಳಗಿ ಅಂಬೇಡ್ಕರ್ ನಗರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಇಲ್ಲಿನ ಜನರು ಇಡಿ ರಾತ್ರಿ ಮನೆಗೆ ನುಗ್ಗಿದ ನೀರು ಹೊರಗಡೆ ಹಾಕುವುದರ ಸಲುವಾಗಿ ಎಂಟು ಘಂಟೆ ಜಾಗರಣೆ ಮಾಡಿದ್ದಾರೆ,ಬೀಳಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮದಲ್ಲಿ ಮನೆ,ಹಾಗೂ ರೈತ ಬೆಳೆಗಳು ಹಾಳಾಗಿವೆ,ಕನಿಷ್ಠ 50 ಕಿಂತ ಹೆಚ್ಚು ಮನೆಗಳು ಈ ಮಳೆಯಿಂದ ಬಾದಿತ ಆಗಿವೆ,ಕೆಲವು ಮನೆಗಳು 50% ಬಿದ್ದಿವೆ. ಪಿಡಿಒ ಹಾಗೂ ಲೆಕ್ಕಾಧಿಕಾರಿಗಳು ಮನೆ,ಹಾಗೂ ಬೆಳೆ ಹಾನಿ ಮಾಹಿತಿಯನ್ನು ಎರಡು ಮೂರು ದಿನಗಳಲ್ಲಿ ಪಡೆದುಕೊಂಡು ತಹಶೀಲ್ದಾರ ಅವರಿಗೆ ನೀಡಬೇಕು,ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗಳಿಗೆ ಕಳುಹಿಸಲು ಸೂಚಿಸಿದ್ದೇನೆ,ಇನ್ನು ಮಳೆಯ ವಾತಾವರಣ ಕಡಿಮೆ ಆಗಿಲ್ಲ,ಇದೆ ರೀತಿಯ ಮಳೆ ಮುಂದುವರೆದರೆ ಕಂಡರಿಯದಷ್ಟು ಹಾನಿ ಆಗುತ್ತದೆ,ಈಗಾಗಲೇ ರೈತರು ಬೆಳೆದ ಈರುಳ್ಳಿ,ಸೋಯಾಬಿನ,ಗೋವಿನ ಜೋಳದ ಬೆಳೆ ಹಾನಿಯಾಗಿದ್ದು,ಜಿಲ್ಲಾಧಿಕಾರಿಗಳ ಗಣಮಕ್ಕೆ ತಂದು ಸಂಪೂರ್ಣ ಸರ್ವೆ ಮಾಡಿಸಿ,ಹಾನಿ ಆಗಿರುವ ಮನೆ,ಬೆಳೆ ಕುರಿತು ಸರ್ಕಾರದ ಗಮನಕ್ಕೆ ತಂದು,ನಷ್ಟ ಪರಿಹಾರ ಕೊಡಿಸುವ ಭರವಸೆ ನೀಡಿದರು,
ಬೀಳಗಿ ಪಟ್ಟಣದಲ್ಲಿ ರಾಜಕಾಲುವೆ ಅವಶ್ಯಕತೆ ತುಂಬಾ ಇದ್ದು,ಈ ಕುರಿತು ಮುಖ್ಯಮಂತ್ರಿಗಳಿಗೆ 10.5 ಕೋಟಿ ರೂ, ಪ್ರಪೋಸಲ್ ಕೊಟ್ಟಿದ್ದು,ರಾಜಕಾಲುವೆಗೆ 6.5 ಕೋಟಿ ರೂ.ಬೇಕು,ಈ ಕುರಿತು ಎಕ್ಸಿಕ್ಯೂಟಿವ್ ಇಂಜಿನಿಯರ್ ಗೆ ಮಾತನಾಡಿದ್ದೇನೆ,ರಾಜಕಾಲುವೆ ಇರದಿದ್ದಕ್ಕೆ ಪಟ್ಟಣದಲ್ಲಿನ ಮನೆಗಳಿಗೆ ನೀರು ನುಗ್ಗಿರುವುದರಿಂದ ಜನರು ಕಹಿ ಅನುಭವಿಸಿದ್ದು,ಇಡಿ ರಾತ್ರಿ ಮನೆಯಲ್ಲಿ ನೀರು ಹೊರಗಡೆ ಹಾಕಲು 8 ಗಂಟೆ ಜಾಗರಣೆ ಮಾಡಿದ್ದಾರೆ ಎಂದರು.
ಈ ವೇಳೆ ತಹಸೀಲ್ದಾರ್ ವಿನೋದ ಹತ್ತಳ್ಳಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಕಾಖಂಡಕಿ.ಪ, ಪಂ, ಮುಖ್ಯಾಧಿಕಾರಿ ದೇವೇಂದ್ರ ಧನಪಾಲ, ಪ,ಪಂ.ಸದಸ್ಯ ಪಡಿಯಪ್ಪ ಕರಿಗಾರ,ಅಜ್ಜು ಬಾಯಿಸರಕಾರ,ಸಿದ್ದು ಸಾರಾವರಿ, ಬಸವರಾಜ್ ಹಳ್ಳದಮನಿ,ಹಾಗೂ ಸಂಗಪ್ಪ ಕಂದಗಲ್ಲ,ಮಹಾದೇವ ಹಾದಿಮನಿ,ಅನಿಲ್ ಗಚ್ಚಿನಮನಿ,ಪಾಂಡು ಮಮದಾಪುರ,ಹನಮಂತ ಗಚ್ಚಿನ ಮನಿ, ಸೇರಿ ಅನೇಕರು ಉಪಸ್ಥಿತರಿದ್ದರು.
ಯಾರ ಮಧ್ಯಸ್ಥಿಕೆ ಬೇಕಿಲ್ಲ,ಪಿಓಕೆ ಮರಳಿಸಬೇಕು ಪ್ರಧಾನಿ ಮೋದಿ ಸ್ಪಷ್ಟ ಸಂದೇಶ
ಮರಳು ತುಂಬಿದ ಟಿಪ್ಪರಗೆ ಒಂದು ಜೀವ ಬಲಿ
ಹಳೆ ಬಾಗಲಕೋಟೆಯಲ್ಲಿ ಯುವಕನಿಗೆ ಚಾಕು ಇರಿತ
ಜಗತ್ತಿಗೆ ಇಂದು ಭಾರತದ ಶಕ್ತಿ ಸಾಮರ್ಥ್ಯದ ಅರಿವು:ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ
ಸರ್ಕಾರದ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು
ಹಸೆ ಮಣೆ ಏರುವ ಮೊದಲೇ ಪೆಟ್ರೋಲ್ ದಾಳಿಗೆ ಒಳಗಾದ ಯುವತಿಯ ಕರುಣಾಜನಕ ಕಥೆ ಇದು
ಮಕ್ಕಳ ಮದುವೆಗೆ ತೆಗೆದ ಸಾಲದ ಶೂಲಕ್ಕೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು
ಕೈಗಾರಿಕೆ ಸ್ಥಾಪನೆಗೆ ಧೈರ್ಯ, ಪರಿಶ್ರಮ ಮುಖ್ಯ : ಡಿಸಿ ಜಾನಕಿ